ಹಿನ್ಷೆಲ್‍ವುಡ್, ಸಿರಿಲ್ ನಾರ್ಮನ್
	1877-1967. ಇಂಗ್ಲಿಷ್ ಭೌತರಸಾಯನವಿe್ಞÁನಿ. ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದು (1919) ಪಿಎಚ್.ಡಿ. ಪಡೆದು (1924) ಅಧ್ಯಾಪಕನಾಗಿ ಸೇವೆ ಸಲ್ಲಿಸುತ್ತ ಅಲ್ಲೇ ರಸಾಯನವಿe್ಞÁನದ ಪ್ರಾಧ್ಯಾಪಕನ ಹುದ್ದೆಗೇರಿದ್ದು ಈತನ ವೈಶಿಷ್ಟ್ಯ. ರಾಸಾಯನಿಕ ಕ್ರಿಯೆಗಳ ಸ್ವರೂಪವನ್ನು ಬಯಲಿಗೆಳೆ ದಿದ್ದು ಮುಖ್ಯ ಸಾಧನೆ. ಎರಡು ಹೈಡ್ರೊಜನ್ ಪರಮಾಣುಗಳು ಒಂದು ಆಕ್ಸಿಜನ್ ಪರಮಾಣುವಿನೊಡನೆ ಕಲೆತು ನೀರಿನ ಒಂದು ಅಣು (ಊ2ಔ) ಆಗುವುದಷ್ಟೆ. ತೋರಿಕೆಗೆ ಇದೊಂದು ಸರಳ ಕ್ರಿಯೆ, ಆದರೆ ವಸ್ತುಸ್ಥಿತಿಯೇ ಬೇರೆ. ಹೈಡ್ರೊಜನ್ ಅಣುವಿನಲ್ಲಿ ಅದರ ಎರಡು ಪರಮಾಣುಗಳಿವೆ (ಊ2). ಮೊದಲು ಅಣು ತನ್ನ ಅಂಗ ಪರಮಾಣುಗಳಾಗಿ ಬೇರ್ಪಡುತ್ತದೆ.
ಊ2ಟ2(ಊ)
ಹೈಡ್ರೊಜನ್ ಪರಮಾಣು ಆಕ್ಸಿಜನ್ ಅಣುವಿನೊಡಗೂಡಿ ಒಂದು ಆಕ್ಸಿಜನ್ ಪರಮಾಣುವನ್ನು ಬಿಡುಗಡೆ ಮಾಡುವುದು. 
[ಊ]+ಔ2ಟ[ಔಊ]+[ಔ]
ಇಲ್ಲಿ ಮೈದಳೆದ [ಔಊ] ಮತ್ತು [ಊ] ಜೊತೆಗೂಡಿ ಊ2ಔ ಅಣು ಮೈದಳೆಯುತ್ತದೆ. [ಔ] ಪರಮಾಣು ಹೈಡ್ರೊಜನ್ ಅಣುವಿನೊಡನೆ ಬೆರೆತು ಮತ್ತೆ [ಔಊ], [ಊ] ಉಂಟಾಗುತ್ತವೆ. ಈ ಕ್ರಿಯಾಸರಣಿ ಮುಂದುವರಿಯುತ್ತ ಹೋಗಿ ಅಂತಿಮವಾಗಿ ನೀರಿನ ಅಣುಗಳು ರೂಪುಗೊಳ್ಳುತ್ತವೆ. ಇದು ವಾಸ್ತವಾಂಶ ಎಂಬುದು ಹಿನ್ಷೆಲ್‍ವುಡ್‍ನ ವಾದಸರಣಿ. ಬೃಹದಣುಗಳಾದ ಪಾಲಿಮರ್‍ಗಳು ಮತ್ತಿತರ ಸದೃಶ ಪದಾರ್ಥಗಳ ರೂಪಣೆ ಕೂಡ ಇದೇ ಮಾದರಿಯದು ಎಂದು ಆತನ ಪ್ರಯೋಗಗಳಿಂದ ಸಿದ್ಧವಾಯಿತು. ಗೋಚರ ಬೆಳಕಿನ ನೆರವಿನಿಂದ ಹೈಡ್ರೊಜನ್ (ಊ2)  ಮತ್ತು ಕ್ಲೋರೀನ್ (ಅಟ2) ಅನಿಲಗಳು ಸಂಯೋಜಿಸಿ ಹೈಡ್ರ್ರೊಜನ್ ಕ್ಲೋರೈಡ್ (ಊಅಟ) ಅಣುಗಳು ಮೈದಳೆಯುವುದಕ್ಕೂ ಇಂಥ ಸರಪಳಿ ಕ್ರಿಯೆಗಳೇ ಕಾರಣ ಎಂದು ನರ್ನ್‍ಸ್ಟ್ (1864-1941) ತೋರಿಸಿದ್ದು ಹಿನ್ಷೆಲ್‍ವುಡ್‍ನ ಸಿದ್ಧಾಂತಕ್ಕೆ ಬೆಂಬಲವಾಯಿತು. ಹೈಡ್ರೊಜನ್ ಮತ್ತು ಆಕ್ಸಿಜನ್‍ಗಳು, ನಿರ್ದಿಷ್ಟ ತಾಪದಲ್ಲಿ, ಮಿಲನವಾಗಿ ನೀರು ಮೈದಳೆವ ಕಾಲದಲ್ಲಿ ಸಿಡಿತ ಉಂಟಾಗಲೂ ಈ ಸರಪಳಿ ಕ್ರಿಯಾವೈಖರಿಯೇ ಕಾರಣ ಎಂಬುದು ಹಿನ್ಷೆಲ್‍ವುಡ್‍ನ ಅಭಿಮತ. ನಿಮ್ನತಾಪದಲ್ಲಿ ಸರಪಳಿಕ್ರಿಯೆ ಪಾತ್ರೆಯ ಭಿತ್ತಿಗಳ ಮೇಲೆ ಜರಗುವುದರಿಂದ ಸರಣಿ ತುಂಡಾಗಿ, ಕ್ರಿಯೆ ಸ್ಥಗಿತಗೊಳ್ಳುವುದು. ಕ್ರಿಯಾದರ ಕುಗ್ಗುವುದು. ಮಂದಗಾಮಿ ಕ್ರಿಯೆ ನಡೆದು ಆಸ್ಫೋಟನೆ ಉಂಟಾಗದು. ರಷ್ಯಸಂಜಾತ ಭೌತರಸಾಯನವಿe್ಞÁನಿ ಸೆಮೆನೊವ್ (1896-1986) ಸಹ ಇದೇ ಫಲಿತಾಂಶ ಪಡೆದಿದ್ದ. ಆದ್ದರಿಂದ 1956ನೆಯ ಸಾಲಿನ ರಸಾಯನವಿe್ಞÁನದ ನೊಬೆಲ್ ಪ್ರಶಸ್ತಿಯನ್ನು ಇಬ್ಬರಿಗೂ ಜಂಟಿಯಾಗಿ ನೀಡಲಾಯಿತು.										
	(ಎಚ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ